ಗುರುವಾರ, ಜುಲೈ 2, 2009

ಭಾವಕ್ಕೆ ಬೇಕಿದ್ದರೆ ಮಾತ್ರ..!

ಇವನು ಹೇಗೆ ಇಷ್ಟೊಂದು ಪ್ರಶ್ನೆಗಳಿಗೆ ಉತ್ತರವಾಗಿಬಿಟ್ಟ..?! ಉತ್ತರವೋ,..ಪ್ರಶ್ನೆಯೋ - ತಡಕಾಡುವುದಕ್ಕೂ ಬಿಡದೆ ರಂಪಮಾಡಿ ಎದೆಗೆ ಆತುಕೊಂಡು ಸುಂದರ ನಗೆ ನಕ್ಕು ಸುಮ್ಮನಿರಿಸಿಬಿಟ್ಟ.

ಯಾವುದನ್ನೂ ಪ್ರಶ್ನಿಸದೆ,ತಡವರಿಸದೆ ಒಪ್ಪದ ನನ್ನ ಉಮೇದಿಗೆ ಸವಾಲೆಸೆದಂತೆ ತನ್ನ ಹಕ್ಕು ಸ್ಥಾಪಿಸಿಬಿಟ್ಟನಲ್ಲ..!

ಹಳ್ಳಿಗರ ಅಗಾಧ ನಂಬುಗೆಯ ವೈಚಿತ್ರ್ಯವನ್ನು ತನಗರಿವಿಲ್ಲದೆ ತನ್ನೊಳಗೆ ದೀಪದಂತೆ ಉರಿಸಿಟ್ಟುಕೊಂಡಿರುವವನು.’ಮುಟ್ಟಿದರೆ ಮುನಿ’ಯಂತೆ ಪ್ರತಿಯೊಂದು ಟೀಕೆ,ವಿಮರ್ಶೆ,ಹೊಗಳಿಕೆಯನ್ನು ಮನಸಾರ ಅನುಭವಿಸಲೆಂದೆ ಕಣ್ಣು ಕಿವಿ ತೆರೆದಿಟ್ಟಂತೆ ಕಂಡು ಪ್ರೀತಿ ಹುಟ್ಟಿಸುತ್ತಾನೆ..!

ಇದು ನಗುವೋ, ಮರುಕವೋ, ಕೊರಗೋ, ಬೆರಗೋ ಅಂತೂ ಯಾವುದನ್ನೂ ಮರುಪರಿಶೀಲಿಸದಂತೆ ಮರುಳು ಮಾಡಿರುವ ಮರುಳ...ಮರುಳರ ಮರುಳ..ಮರುಳು ಮಾದೇವ..
ಅಸ್ತಿತ್ವಕ್ಕೆ ಗರಬಡಿಸುವಂತೆ ಮೈಗೆಲ್ಲ ಬೂದಿ ಬಳಿದು,ಬಿಳುಚಿ, ಗಂಟು ಜಡೆ ಉದ್ದನೆ ಇಳಿ ಬಿಟ್ಟು..ಎಚ್ಚರಿಸಲೋ,ಹುಚ್ಚು ಹರಡಲೋ,ಬೆಚ್ಚಿಸಲೋ,ಅಥವ ಸುಮ್ಮನೆ ಕೊಚ್ಚಿಹೋಗಲೋ ಮಹಾದೇವನನ್ನೇ ಆವಾಹಿಸಿಕೊಂಡು ಶಿವ ಶಿವಾ ಎನಿಸಿಬಿಟ್ಟಾತ..!

ಎಲ್ಲವನ್ನೂ ನುಂಗಿ,ಒಗರು ಮೈ ಮಾಡಿಕೊಂಡು,ಅಷ್ಟಗಲ ಗಾರುಡಿಗನ ಕಣ್ಣು ಬಿಟ್ಟು,..ಸಿಟ್ಟೋ,ಸಂಕಟವೋ,ಸೆಡವೋ - ಒಂದೂ ತಿಳಿಸದೆ ತನ್ನಷ್ಟಕ್ಕೆ ತಾನು ನೆಡೆದುಬಿಡುವ ಇವನ ನಿರ್ಭಿಡೆ ಹೆಪ್ಪುಗಟ್ಟಿ ಹುಳಿಬರದೆ ಹಾಗೇ ಉಳಿದಿದೆ.

ನನ್ನ ಅಂಗಯ್ಯಂಗಳದಲ್ಲಿ ಸದ್ದಿರದೆ ಜಾಗ ಪಡೆದು ಬೆಚ್ಚಗೆ ಕರಗುತ್ತಾ ನಾನೇ ಇನ್ನೂ ಓದದೆ ಬಿಟ್ಟಿದ್ದ ಗೆರೆಗಳ ಜಾಡಿನಲ್ಲಿ ಗಮನಿಸುವ ಮೊದಲೆ ಪ್ರಯಾಣ ಬೆಳೆಸಿದ್ದಾನೆ..ಅಲೆಮಾರಿಗೆ ಗಡಿಹಾಕಿಕೊಟ್ಟ ಗರ್ವ ಪೂರ್ತಿ ನಿನಗೇ ಇರಲಿ ಎಂಬ ದೊಡ್ಡಸ್ತಿಕೆಯ ಅಭಿದಾನ ಕರುಣಿಸಿ ಸೊಗಸು ಮೂಡಿಸುವ ಅತಿ ಜಾಣತನ ಬೇರೆ..!

ಐದು ವರ್ಷಗಳ ಹಿಂದಿನ ಸಲುಗೆಗೆ ಈಗ ಹೀಗೊಂದು ಅರ್ಥ ಗಂಟು ಬೀಳುವುದು ಅವರವರ ಭಾವಕ್ಕೆ ಬೇಕಿದ್ದರೆ ಮಾತ್ರ !
ಹಳೆಯ ರದ್ದಿಯನ್ನೆಲ್ಲಾ ಹೊಸಕಿ ಹೊಸ ಹಾಳೆ ಮಾಡುವಂತೆ, ಮತ್ತೊಮ್ಮೆ ಹೊಚ್ಚಹೊಸ ಘಮಲಿನ ಅಚ್ಚಬಿಳಿಹಾಳೆ...ಅದರಲ್ಲಿ ಕಣ್ಣು ಕಿರಿದು ಮಾಡಿ ನೋಡಿದರೆ ಮಾತ್ರ ಕಾಣುವ ಮತ್ತದೇ ಬಿಳಿಯ ಅಕ್ಷರಗಳು..ಕಂಡೂ ಕಾಣದ ಸೋಗು..!!

21 ಕಾಮೆಂಟ್‌ಗಳು:

sureshkumar ಹೇಳಿದರು...

hi charitha i re read your writing its so well written and i like that the way you choose those specially choosen words like pearls from sea shells hidden in sand bed, to make such a nice piece of ornament which i like to adore on my neck which is again built with the very sand your are talking about .so the pearls once again getting lost in the same sand which you had picked up from.
does my writing make sense .so just treat as another writing than the comment it self on your writing

Prabhuraj Moogi ಹೇಳಿದರು...

ಚರಿತಾ ಮೇಡಂ, ಪರಗಳಲ್ಲಿ ಎಸ್ಟೊಂದು ಭಾವನೆಗಳನ್ನು ಹಿಡಿದಿಟ್ಟಿದ್ದೀರಿ, ಪದ ಭಂಡಾರವೇ ಇದೆ ನಿಮ್ಮ ಹತ್ರ, ಸಾಲು ಸಾಲುಗಳಲ್ಲೂ ಏನೇನು ಅರ್ಥವಿದೆ, ಬಹಳ ಚೆನ್ನಾಗಿತ್ತು ಲೇಖನ, ನೀವು ಮತ್ತೆ ಬರೆಯುತ್ತಿರುವುದು ಖುಷಿ ಕೊಟ್ಟಿದೆ.

jomon varghese ಹೇಳಿದರು...

chennagide..

ಚರಿತಾ ಹೇಳಿದರು...

@ suresh
thanks for the pearl u presented here...:)

keep visiting.

ಚರಿತಾ ಹೇಳಿದರು...

@ prabhu,

ಥ್ಯಾಂಕ್ಸ್ ಪ್ರಭು.
ನಿಮ್ಮ ಪ್ರೀತಿಯ ಓದಿಗಾಗಿ.

ಭಾವಗಳೆಲ್ಲಕ್ಕು ಪದ ಹುಡುಕುತ್ತ ಒಮ್ಮೆ ನೆಮ್ಮದಿ ಮತ್ತೊಮ್ಮೆ ಅಸಮಾಧಾನ.
ನೀರಿನಲ್ಲಿ ಕೈಗೆ ಸಿಕ್ಕೂ ಸಿಗದೆ ಜಾರಿ ತಪ್ಪಿಸಿಕೊಳ್ಳುವ ಮೀನಿನಂತೆ ಈ ಪದಗಳ ಆವೇಗ.

ಚರಿತಾ ಹೇಳಿದರು...

@ jomon,

thanks

Unknown ಹೇಳಿದರು...

ಸುಮ್ಮನೆ ಸುಮ್ಮ ಸುಮ್ಮನೆ ನಮ್ಮ ಭಾವಲೋಕವನು ಹಸನುಗೊಳಿಸುವ ನಿಮ್ಮ ಮನದ ಲಹರಿಗಳು ಮುದ ನೀಡುತ್ತವೆ ಚರಿತರವರೆ ನಿಮ್ಮ ಭಾವನೆಗಳಲಿ ಒಂದು ರೀತಿಯ ನವಿರುತನವಿದೆ ನಮ್ಮನ್ನು ಆಮಲಿನತೆ ಆವರಿಸುವ ನವಿರು.ಕಾಡಸಂಪಿಗೆಯ ಒಗ್ಗರುತನಕೆ ಅಭಿಲಾಷೆಗಳು ಮತ್ತಷ್ಟು ಸುಗಂದ ಸೂಸುತಿರಲಿ ನಿಮ್ಮ ಭಾವನ ಲಹರಿ ಅದರ ಪಾಡಿಗೆ ಅದು

Unknown ಹೇಳಿದರು...

ಸುಮ್ಮನೆ ಸುಮ್ಮ ಸುಮ್ಮನೆ ನಮ್ಮ ಭಾವಲೋಕವನು ಹಸನುಗೊಳಿಸುವ ನಿಮ್ಮ ಮನದ ಲಹರಿಗಳು ಮುದ ನೀಡುತ್ತವೆ ಚರಿತರವರೆ ನಿಮ್ಮ ಭಾವನೆಗಳಲಿ ಒಂದು ರೀತಿಯ ನವಿರುತನವಿದೆ ನಮ್ಮನ್ನು ಆಮಲಿನತೆ ಆವರಿಸುವ ನವಿರು.ಕಾಡಸಂಪಿಗೆಯ ಒಗ್ಗರುತನಕೆ ಅಭಿಲಾಷೆಗಳು ಮತ್ತಷ್ಟು ಸುಗಂದ ಸೂಸುತಿರಲಿ ನಿಮ್ಮ ಭಾವನ ಲಹರಿ ಅದರ ಪಾಡಿಗೆ ಅದು

sureshkumar ಹೇಳಿದರು...

thanks good you are posting on to your blog this days

sureshkumar ಹೇಳಿದರು...

i love your expression , i re read this and going crazy about your intensity in your expression , keep going cheer you charitha

Santhosh Rao ಹೇಳಿದರು...

ಚರಿತಾ ..

ಹ್ಮಂ.. ಈ ಭಾವ ಹೀಗೇನೆ ! ನಮ್ಮೆಲ್ಲ ಆರ್ಭಟಗಳಿಗೆ, ಕಣ್ಣೀರಿಗೆ ಒಂದು ಒರೋಗೂ ಹೆಗಲು ಬೇಕು ಅನ್ನೋದು ಭಾವಕ್ಕೆ ಬೇಕಿದ್ದರೆ ಮಾತ್ರ..! ಕೊನೆಗೆ ನಮ್ಮೆಲ್ಲಾ ಒಳಗಿನ ವಿಮರ್ಶೆಗಳು ನಮ್ಮ ನಮ್ಮ ಮನಸ್ಸಿನ reflection...

Umesh Balikai ಹೇಳಿದರು...

ಚರಿತಾ,

ತುಂಬಾ ಮುದ್ದಾದ ಸಾಲುಗಳು... ಮತ್ತೆ ಮತ್ತೆ ಓದಬೇಕೆನಿಸಿತು. ಅಭಿನಂದನೆಗಳು :)

- ಉಮೇಶ್

ಸಾಗರದಾಚೆಯ ಇಂಚರ ಹೇಳಿದರು...

ಚರಿತಾ ಮೇಡಂ,
ನಿಮ್ಮ ಲೇಖನ ಖುಷಿ ಕೊಟ್ಟಿತು
ಪದಗಳ ಪ್ರಯೋಗ ತುಂಬಾ ಸುಂದರವಾಗಿದೆ.
ನಿಮ್ಮ ಹಾಗೆ ನಾನು ಸಂಶೋಧಕ ಆದರೆ ಕ್ಷೇತ್ರ ಮಾತ್ರ ಬೇರೆ

ದಿನಕರ ಮೊಗೇರ ಹೇಳಿದರು...

ತುಂಬಾ ಚೆನ್ನಾಗಿದೆ..... ಬರಹ ತುಂಬಾ ಅರ್ತಗರ್ಭಿತವಾಗಿದೆ .......

ಚಕೋರ ಹೇಳಿದರು...

ನಿಮ್ಮ ಬ್ಲಾಗ್ ತಡವಾಗಿ ನೋಡಿದೆ. ಬಹಳ ಚೆನ್ನಾಗಿ ಬರೀತೀರಿ ನೀವು.

ಆದರೆ ತುಂಬಾ ಸಮಯವಾಯ್ತು ಅಪ್ಡೇಟ್ ಮಾಡದೇ ಅನ್ನಿಸುತ್ತೆ.

ಬರೆಯಿರಿ, ಕಾಯ್ತಿರ್ತೀವಿ.

ಮಲ್ಲಿಕಾಜು೯ನ ತಿಪ್ಪಾರ ಹೇಳಿದರು...

nice one

ಗೌತಮ್ ಹೆಗಡೆ ಹೇಳಿದರು...

mast barediddeera:)

vinay ಹೇಳಿದರು...

very impressive blog it shows the level of maturity in you.. once again i would like to say great work

ಜಲನಯನ ಹೇಳಿದರು...

ಚರಿತಾ, ನಿಮ್ಮ ಗೂಡಿಗೆ ಮೊಅದಲ ಭೇಟಿ ನನ್ನ ಬ್ಲಾಗು ಮಿತ್ರ ಈಶ್ ಮೂಲಕ ಬಂದೆ...
ನಿಮ್ಮ ಬರವಣಿಗೆ ಹೂಂ....!! ಚಂದ...ಪದಗಳ ಬಳಕೆ ಮತ್ತು ನಿರೂಪಿಸೋ ರೀತಿ...ಮೆಚ್ಚಿದೆ...
ನನ್ನ ಗೂಡಿಗೂ ಬನ್ರಲಾ....www.jalanayana.blogspot.com

ಚಿತ್ರಾ ಸಂತೋಷ್ ಹೇಳಿದರು...

ಏನಾದ್ರೂ ಬರೆಯಿರಿ..ತುಂಬಾ ಚೆನ್ನಾಗಿ ಬರೇತೀರಿ.

&ಚಿತ್ರಾ ಸಂತೋಷ್

ಮಂಸೋರೆ ಹೇಳಿದರು...

ಹೇಳಲು ಈ ಹಿಂದಿನ ಪ್ರತಿಕ್ರಿಯೆಗಳು ಏನೂ ಉಳಿಸಿಲ್ಲ. :)
ನಿಮ್ಮ ಪಾಡಿಗೆ ನೀವು ಬರೆದಿದ್ದರೂ ಭಾವದ ಅಭಿವ್ಯಕ್ತಿ ಪದಗಳಲ್ಲಿ ತುಂಬಾ ಸೂಕ್ಷ್ಮವಾಗಿ ಹೆಣೆದಿರುವ ಶೈಲಿ ಇಷ್ಟವಾಯಿತು.