ಶುಕ್ರವಾರ, ಸೆಪ್ಟೆಂಬರ್ 26, 2008
ಮಳೆ ಮಾತು
ನಿಧಾನವಾಗಿ ಎಚ್ಚರಿಸುವಂತೆ
ಶುರುವಾದ ಚುರುಚುರು ಹನಿ
ಚುಚ್ಚಿದರೂ ಬೆಚ್ಚದ ನನ್ನ ಕಂಡು
ಸೆಟಗೊಂಡು ರಪ ರಪ ಬಿರುಸಾಯಿತು
ನೀಲಿ ಹೂಗಳ ಛತ್ರಿ ಪಾಪ,ಸಹಿಸೀತೆ?
ಒಡ್ಡಿತು ತನ್ನೊಂದಿಗೆ ನನ್ನನ್ನೂ...
ಚಳಿಯಿನ್ನೂ ಮುದುಡಿತ್ತು ಒಳಗೆ ಬೆಚ್ಚಗೆ
ಮಳೆಯೇ ನಾಚಿರಬೇಕು
ನನ್ನ ಪಾಡಿಗೆ ನಾನಿರುವ ಬಗೆಗೆ
ಪಟ್ಟಿರಬೇಕು ಪಶ್ಚಾತ್ತಾಪ ತನ್ನ ಪರಿಗೆ
ಕಿವಿಗೊಟ್ಟ ಕಣ್ಬಿಟ್ಟ ಗೆಳತಿಯ ಕಂಡು
ಭ್ರಮಿಸಿರಬೇಕು ಇನ್ನೊಂದು ಸುತ್ತು ಹೆಚ್ಚಿಗೆ
ತೋಯಿಸಿತು ಬರಿಮೈಯ ಇರವು ಅರಿವಾಗುವಂತೆ
ಮನದಣಿಯೆ ಹರಟಿತು ದುಃಖ ದುಮ್ಮಾನ
ಕೊಚ್ಚಿಹೋಗಿತ್ತು ಬಿರುಸು ಬಿಗುಮಾನ
ಬಿಚ್ಚಿ ಹರಡಿತು ಏರಿಳಿತದ ಗಾನ
ಗುಟ್ಟು ಪಿಸುಗುಟ್ಟಿ ನಕ್ಕಿತೇಳು ಬಣ್ಣಗಳ
ದಿಟ್ಟಿ ನೆಡುವಂತೆ...
ಬೆಚ್ಚನೆ ಮೈದುಂಬಿತು ಮುದ್ದಿಸಿ ಹಸಿಬಿಸಿಲ
...ಮತ್ತೆ ಗುಟ್ಟಾಡಲು,...
ಹಚ್ಚನೆ ಹರಟಿ ಹರಡಲು
ನಾನೂ ಕಾಯುತ್ತಿರುವೆ...
ಮಳೆ ಮಾತು ಪೋಣಿಸಲು
ಹನಿಹನಿಯಾಗಿ ತೊಡಲು
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
12 ಕಾಮೆಂಟ್ಗಳು:
ರಣ ಬಿಸಿಲಿನಿ ಸೆಕೆ ಹೊಡಿತಿರೂ ಈ ನನ್ ಆಫೀಸ್ ಒಳಗೇನೇ ಮಳೆ ಬಂದು ನಿಂತಂತಾಯಿತು !!
ಮಳೆ ನಿಂತ ಮೇಲೆ ಇನ್ನೇನ್ .. ಮತ್ತದೇ ಮೌನ ಅದೇ ಏಕಾಂತ !!
ನಂಗೂ ಮಳೇಲಿ ತೋಯ್ದಂತಾಯ್ತು.. ಚಂದ ಕವನ..
@santosh,
ಮೌನ ಮತ್ತು ಏಕಾಂತದ ಗಾಢ ಅನುಭವ ಕೊಡೋದು ಮಳೆ ಮಾತ್ರ ಇರಬಹುದೇನೊ..!
ಜಡಿ ಮಳೆಯಲ್ಲಿ ಒಂಟಿಯಾಗಿ ಇದ್ದಾಗ,ಭಯ ಹುಟ್ಟಿಸುವ ಏಕಾಂತದ ಅನುಭವ ಆಗುತ್ತೆ..!
ಹಾಗೇ ಎಷ್ಟೋ ಬಾರಿ ಅವಿಸಿಟ್ಟುಕೊಂಡ ಎಲ್ಲವನ್ನೂ ಒಮ್ಮೆಗೇ ಆರ್ತವಾಗಿ ಹೇಳಿಕೊಳ್ಳುತ್ತಿದೆಯೇನೊ ಅಂತಾನೂ ಅನ್ನಿಸುತ್ತೆ..!
@sushruta,
thank u ಸುಶ್ರುತ...:)
ನಿನ್ನ ವಿಮರ್ಶೆ,ಪ್ರೀತಿ ಹೀಗೆ ಇರ್ಲಿ..
ಚೆಂದದ ಕವಿತೆ...
@jomon,
thank u jomon....
ಮನೆಯಲ್ಲಿ ಮಳೆ ಮಾತು ಓದುತ್ತಿರುವಾಗ ಹೊರಗೆ ಜೋರು ಮಳೆ ಶುರುವಾಯ್ತಲ್ಲ![ಸತ್ಯವಾಗಿಯೂ] ನಿಜ ಮಳೆ ಹಾಗೂ ಕವನದ ಮಳೆ ಎರಡನ್ನು enjoy ಮಾಡಿದೆ. thanks.
ಬರೆಯುತ್ತಿರಿ.....
ಶಿವು.ಕೆ.
ನನ್ನ ಮತ್ತೊಂದು ಬ್ಲಾಗಿಗೆ ಬನ್ನಿ:
http://camerahindhe.blogspot.com/
ಓದಿ ಖುಷಿಯಾದ್ರೆ ಕಾಮೆಂಟಿಸಿ.
your blog featured in Kannada Prabha website.
@ 'minugutaare'
thanks for featuring my blog..
ಮಳೆ ಬ೦ದಾಗ ಸಾಮಾನ್ಯವಾಗಿ ಮೌನವೇ ಮಾತಾಗಿಬಿಡತ್ತೆ. ಒ೦ದು ಚೆ೦ದದ ಕವನ ಕಟ್ಟಿದ್ದಿಕ್ಕೆ Thanks :)
~ ಹರ್ಷ
@ Shivu & Harsha
ಧನ್ಯವಾದಗಳು.
ಆಗಾಗ ಭೇಟಿ ಕೊಡುತ್ತಿರಿ.
hi i like ur attitude in ur orkut profile its amazing i got very good information from ur profile bye take care
mast:)
ಕಾಮೆಂಟ್ ಪೋಸ್ಟ್ ಮಾಡಿ